Submission 974

ನಗು

ರಚನೆ : ಸರಿತಾ ಕುರಡಗಿ

----------------------------------

ಮಗು ನಿನ್ನ ನಗು ಚೆಂದ ನಗು ನಿನ್ನ ಮೊಗದ ಅಂದ ಈಶ ಕೊಟ್ಟ ವರವು ನೀನು ಅಮ್ಮನ ಮುದ್ದು ಕಂದ ನೀನು ನೋವೆಲ್ಲ ಮರೆಸಿದಂತ ನಿನ್ನ ನಗು ಸಂತಸವ ತಂದಂತ ನಿನ್ನ ನಗು ಇರುಳು ಕಳೆದ ಬೆಳದಿಂಗಳ ನಗು ಬಾಳಲ್ಲಿ ಬೆಳಕು ತುಂಬಿದಂತ ನಗು ಅರಳಿದ ಹೂವಿನಂತ ಮೊಗದ ನಗು ಆಗಸದಿ ಕಾಮನಬಿಲ್ಲಿನಂತ ನಗು ಮಿನುಗುವ ತಾರೆಯಂತ ನಗು ಹುಣ್ಣಿಮೆಯ ಚಂದ್ರನಂತ ನಗು ಮಗು ನಿನ್ನ ನಗು ಎಷ್ಟು ಚೆಂದ ಮಗು ನಿನ್ನ ನಗು ಎಷ್ಟು ಅಂದ

----------------------------------

ನೋಂದಣಿ ಐಡಿ : KPF-S1-5462

0
Votes
141
Views
1 Year
Since posted

Finished since 497 days, 20 hours and 4 minutes.

Scroll to Top