Submission 623

ಮನದ ಒಡತಿ

ರಚನೆ : ಪವನ ಸಿ. ಪಂಡಿತ್

----------------------------------

ಹೊಂಗನಸಿನ ನನ್ನ ಪ್ರೇಯಸಿಯಾಗಿ ವರಿಸಿ ಬಂದವಳು ನೀ, ನನ್ನ ಮನದಂಗಳದಲ್ಲಿ ಕಂಪು ಸುಸುತಿರುವ ಮಲ್ಲಿಗೆಯು ನೀ, ಅರಿವಿಲ್ಲದೆ ಮನ ಗೆದ್ದ ಮೋಹಾಂಗನೆಯು ನೀ, ಹರಿದ ಪುಟದಂತಿರುವ ಬದುಕನು ಒಂದು ಪುಸ್ತಕದಂತಾಗಿರಿಸಿದೆ ನೀ, ನನ್ನ ಹೃದಯದ ತಂತಿಗೆ ಶೃತಿ ಕೊಟ್ಟು ನುಡಿಸಿದವಳು ನೀ, ವಿರಹವನ್ನು ದೂರಾಗಿಸಿದ ಜೊತೆಗಾತಿಯು ನೀ, ಮರೆಯುವ ಮುನ್ನವೇ ಭಾಸಿಸುವ ನೆನಪಿನಂತಿರುವೆ ನೀ, ಪಯಣದಲ್ಲಿ ಹೇಳಲಾರದಷ್ಟು ತುಂಬಿರುವ ಕೌತುಕ ನೀ, ಕನವರಿಕೆಯಲ್ಲಿ ಮರುಕಳಿಸುವ ಮುಗುಳುನಗೆಯು ನೀ, ಬಿಡಿಸಲಾಗದಷ್ಟು ಸಂಗಾತಿಯಾಗಿ ನನ್ನ ಜೊತೆ ಬೆರೆತಿರು ನೀ, ಬೆರೆತಿರು ನೀ, ಬೆರೆತಿರು ನೀ...

----------------------------------

ನೋಂದಣಿ ಐಡಿ : KPF-S1-5222

0
Votes
124
Views
1 Year
Since posted

Finished since 499 days, 1 hours and 24 minutes.

Scroll to Top