Submission 463

ಅವಳು

ರಚನೆ : ಯೋಗೇಶ ಎನ್ ಸಿ

----------------------------------

ಮಂಜು ಸುರಿವ ವೇಳೆ, ಮುಂಜಾನೆ ಹರಿವ ವೇಳೆ ಬಂದೆ ಎದೆಗೆ ಎರಗಿ, ಹಳೆ ನೆನಪು ಹೊತ್ತುತಂದೆ ಭುಜಕೆ ಮೊಗವ, ಕೇಶ ಹೊರೆಯ ಹರಿಸಿದೆ ಹಿಡಿದ ಕೈಗೆ ಸಂಚಿತ ಸಂವೇದ ಬೀಳ್ಕೊಟ್ಟೆ ಹಣೆಗೊಂದು ಮುತ್ತಿಡದೆ ಕಣ್ರೆಪ್ಪೆ ಸನ್ನೆಗೆ ಹಚ್ಚಿದ ಕಾಡಿಗೆ ಕಾಡಿದೆ ಅಳುವಿನೋಳಗು ನಗು ಮೂಡಿದೆ ಕಣ್ಣೀರು ಬಂದರು ಅಳದೆ ನೀ ಅಳಿದೆ ಮಾತಿನ ಕೊಲೆಗಾರನಾಗಿ, ಮೌನದ ಸಂಗಾತಿಯಾದೆ ಸಂತಾಪಗಳಿಗು ಸಂಧಾನ ಮಾಡಿ, ಸುಮ್ಮನಾದೆ

----------------------------------

ನೋಂದಣಿ ಐಡಿ : KPF-S1-5036

0
Votes
122
Views
1 Year
Since posted

Finished since 502 days, 14 hours and 19 minutes.

Scroll to Top