Submission 958

ನಾನೊಬ್ಬ ಶಿಕ್ಷಕ

ರಚನೆ : ಕೆ.ಆರ್.ನಾಗರಾಜ ಶೆಟ್ಟಿ

----------------------------------

ನಾನು ಮಾಡಿಸಬೇಕಿದೆ ಪ್ರಾರ್ಥನೆಯ ಜೊತೆಗೆ ಪ್ರಯತ್ನವನ್ನ ತೆಗೆದುಕೊಳ್ಳಬೇಕಿದೆ ಹಾಜರಾತಿಯ ಜೊತೆಗೆ ಮಕ್ಕಳ ಪ್ರೀತಿಯನ್ನ ಕಲಿಸಿಕೊಡಬೇಕಿದೆ ಗಣಿತದ ಜೊತೆಗೆ ಗಣ್ಯನಾಗುವುದನ್ನ ಕಾರಣ..... ನಾನೊಬ್ಬ ಶಿಕ್ಷಕ ಓದಿಸಬೇಕಿದೆ ಪುಸ್ತಕದ ಜೊತೆಗೆ ಮಸ್ತಕವನ್ನ ಹೇಳಿಕೊಡಬೇಕಿದೆ ಪಾಠದ ಜೊತೆಗೆ ಆಟವನ್ನ ಬದಲಿಸಬೇಕಿದೆ ಕೈ ಬರಹದ ಜೊತೆಗೆ ಹಣೆ ಬರಹವನ್ನ ಕಾರಣ..... ನಾನೊಬ್ಬ ಶಿಕ್ಷಕ ಪರೀಕ್ಷಿಸಬೇಕಿದೆ ಕಲಿಕೆಯ ಜೊತೆಗೆ ವ್ಯಕ್ತಿತ್ವವನ್ನ ಕೊಡಬೇಕಿದೆ ಅಂಕದ ಜೊತೆಗೆ ಅರಿವನ್ನ ಶ್ರೀಮಂತಗೊಳಿಸಬೇಕಿದೆ ಮೆದುಳಿನ ಜೊತೆ ಹೃದಯವನ್ನ ಕಾರಣ.....ನಾನೊಬ್ಬ ಶಿಕ್ಷಕ.

----------------------------------

ನೋಂದಣಿ ಐಡಿ : KPF-S1-5450

0
Votes
141
Views
1 Year
Since posted

Finished since 453 days, 23 hours and 50 minutes.

Scroll to Top