Submission 473

"ಯಾರು...?"

ರಚನೆ : ಸಂಕೇತ್ ಎಂ ಆರ್

----------------------------------

ಯಾವ ಶಿಲ್ಪಿಯೂ ಕೆತ್ತದಾ ಹಾಗೆ.. ಬೆಟ್ಟಗಳ ಬಿತ್ತಿಯಾ ಕೆತ್ತಿದವನಾರು? ಯಾವ ಕುಂಚದಲು ಇಲ್ಲದಾ ಬಣ್ಣಗಳ.. ಹೂವ ಗುಚ್ಚದಲಿ ಇಟ್ಟಿರುವನಾರು? ಯಾವ ವಾದ್ಯದಲು ಹೊರಹೊಮ್ಮದಾ ದನಿಯ.. ಹಕ್ಕಿಗಳ ಕಂಠದಲಿ ಬಿಟ್ಟಿರುವನಾರು? ಮೇಣದಾ ಬತ್ತಿಯು.. ದೀಪದಾ ಹತ್ತಿಯು.. ಸೂಸದಾ ಬೆಳಕಚಂದಿರನ ಮಂದಿರದಲಿ ಹೊತ್ತಿಸಿದವನಾರು? ಬೆಲ್ಲ ಸಕ್ಕರೆಗಳಲ್ಲೆಲ್ಲೂ ಇಲ್ಲದಾ.. ಭೀಮಸೇನ ನಳನೂ ಬಲ್ಲದಾ ರುಚಿರಸದೌತಣವ ಹಣ್ಣಂಪಲಿನಲಿ ತುಂಬಿದವನಾರು? ಕೊಳ ತೊಟ್ಟಿ ಅಣೆಕಟ್ಟು ಯಾವುದರಲೂ ಹಿಡಿಯದ ನೀರನೆಲ್ಲಾ... ಸಾಗರದಿ ಹಿಡಿದು ಕಟ್ಟಿದವನಾರು..? ಹೊಲ ಗದ್ದೆ ತೋಟ ಉದ್ಯಾನದಲೂ ಇಲ್ಲದಾ ತರತರ ಗಿಡಬಳ್ಳಿ ಮರಗಳ...ಮಲೆನಾಡ ಕಾಡಿನಲಿ ಬಿತ್ತಿದವನಾರು? ಯಾರು.... ಯಾರು...?? ಎಲ್ಲವನು ಮಾಡಿ ಎಲ್ಲೊ ಮರೆಯಾಗಿ ಎಲ್ಲರನು ಹಾಗೆ ನೋಡುತಿಹನಾರು...? ಕಾಯುತಿಹನಾರು?

----------------------------------

ನೋಂದಣಿ ಐಡಿ : KPF-S1-5043

0
Votes
131
Views
1 Year
Since posted

Finished since 502 days, 9 hours and 32 minutes.

Scroll to Top